Posts

ವಿದ್ಯಾರ್ಥಿಗಳ ಗಮನಕ್ಕೆ : 1 ಲಕ್ಷ ರೂ.ವರೆಗೆ ನೀಡುವ ಈ ಮೂರು ಸ್ಕಾಲರ್ ಶಿಪ್ ಗಳ ಬಗ್ಗೆ ತಿಳಿಯಿರಿ |Scholarship

Image
ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ನೀಡಲಾಗುವ ಒಂದು ರೀತಿಯ ಆರ್ಥಿಕ ಸಹಾಯವಾಗಿದೆ. ಸೆಪ್ಟೆಂಬರ್-ಅಕ್ಟೋಬರ್ 2023 ರ ಗಡುವಿನೊಂದಿಗೆ ಮೂರು ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿವೇತನಗಳು ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳಿಗೆ ದಾರಿದೀಪವಾಗಿ ನಿಲ್ಲುತ್ತವೆ. ಈ ಲೇಖನದಲ್ಲಿ ಆ ಮೂರು ವಿದ್ಯಾರ್ಥಿ ವೇತನದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. 1. ಜಿಎಸ್ ಕೆ ಸ್ಕಾಲರ್ಸ್ ಪ್ರೋಗ್ರಾಂ 2023-24 ಜಿಎಸ್ಕೆ ಸ್ಕಾಲರ್ಸ್ ಪ್ರೋಗ್ರಾಂ 2023-24 ಭಾರತದ ಸರ್ಕಾರಿ ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಬಿಎಸ್ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಗುರಿಯನ್ನು ಹೊಂದಿದೆ. ಅರ್ಹತೆ 12 ನೇ ತರಗತಿಯಲ್ಲಿ ಕನಿಷ್ಠ 65% ಅಂಕಗಳನ್ನು ಪಡೆದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 6,00,000 ಕ್ಕಿಂತ ಕಡಿಮೆ ಇರಬೇಕು. ಬಹುಮಾನಗಳು: ವರ್ಷಕ್ಕೆ ರೂ. 10,000/- 1,00,000 ವರೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-10-2023 ಅರ್ಜಿ ವಿಧಾನ: ಆನ್ ಲೈನ್ ಅರ್ಜಿಗಳು ಮಾತ್ರ ವೆಬ್ ಸೈಟ್ : www.b4s.in/it/GSKP3 2. ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ 2023-24 ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ 2023-24 ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆರ್...

ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?

Narendra Modi Enters Whatsapp Channels: ವಾಟ್ಸಾಪ್ನ ಹೊಸ ಫೀಚರ್ ಆಗಿರುವ ಚಾನಲ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆಯಾಗಿದ್ದಾರೆ. ತಮ್ಮ ಮೊದಲ ಪೋಸ್ಟ್ನಲ್ಲಿ ಅವರು ಸಂಸತ್ ಭವನದ ಫೋಟೋವನ್ನು ಹಾಕಿದ್ದಾರೆ. ಯಾರು ಬೇಕಾದರೂ ಮೋದಿ ಅವರ ವಾಟ್ಸಾಪ್ ಚಾನಲ್ ಅನ್ನು ಫಾಲೋ ಮಾಡಬಹುದು. ನಿಮ್ಮ ಫೋನ್ ನಂಬರ್ ಇತ್ಯಾದಿ ವಿವರ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಚಾನಲ್ ಅಡ್ಮಿನ್ಗೂ ಈ ಮಾಹಿತಿ ಗೊತ್ತಾಗುವುದಿಲ್ಲ ನವದೆಹಲಿ, ಸೆಪ್ಟೆಂಬರ್ 19:  ವಿಶ್ವದ ಅತಿದೊಡ್ಡ ಚಾಟಿಂಗ್ ಪ್ಲಾಟ್​ಫಾರ್ಮ್  ವಾಟ್ಸಾಪ್  ಇತ್ತೀಚೆಗೆ ಹೊಸ ಫೀಚರ್ ಆದ ವಾಟ್ಸಾಪ್ ಚಾನಲ್ಸ್ ಅನ್ನು ಅನಾವರಣಗೊಳಿಸಿತ್ತು. ಈಗ ಪ್ರಧಾನಿ  ನರೇಂದ್ರ ಮೋದಿ  ಅವರು ವಾಟ್ಸಾಪ್ ಚಾನಲ್ಸ್ (Whatsapp Channels) ಸೇರಿದ್ದಾರೆ. ತಮ್ಮ ವಾಟ್ಸಾಪ್ ಚಾನಲ್​ನಲ್ಲಿ ಅವರು ಮಾಡಿದ ಮೊದಲ ಪೋಸ್ಟ್ ಹೊಸ ಸಂಸದೀಯ ಭವನದ ಫೋಟೋ. 'ವಾಟ್ಸಾಪ್ ಕಮ್ಯೂನಿಟಿ ಸೇರಲು ಖುಷಿ ಎನಿಸುತ್ತಿದೆ. ಸಂವಾದಗಳನ್ನು ನಡೆಸುವ ನಮ್ಮ ಪ್ರಯಾಣದಲ್ಲಿ ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದೇವೆ. ಇಲ್ಲಿ ನಾವು ಸಂಪರ್ಕದಲ್ಲಿ ಇರೋಣ. ಹೊಸ ಸಂಸತ್ ಭವನ ಕಟ್ಟಡದ ಚಿತ್ರ ಇಲ್ಲಿದೆ…' ಎಂದು ನರೇಂದ್ರ ಮೋದಿ ಅವರು ತಮ್ಮ ವಾಟ್ಸಾಪ್ ಚಾನಲ್ಸ್​ನಲ್ಲಿ ಹಾಕಿದ ಮೊದಲ ಪೋಸ್ಟ್​ನಲ್ಲಿ ಬರೆದಿದ್ದಾರೆ. ಕಟ್ಟಡದ ಚಿತ್ರವನ್ನೂ ಲಗತ್ತಿಸಿದ್ದಾರೆ. ನರೇಂದ್ರ ಮೋದಿ ಅವರು ವಾಟ್ಸಾಪ್ ಚಾನಲ್​ನಲ್ಲಿ ಇನ್...

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಶಾಂತಿನಿಕೇತನ

ನವದೆಹಲಿ: ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ನೊಬೆಲ್ ಪುರಸ್ಕೃತ ರವೀಂದ್ರನಾಥ ಠ್ಯಾಗೋರ್ 1901ರಲ್ಲಿ ಸ್ಥಾಪಿಸಿದ ಶಾಂತಿನಿಕೇತನ ಯುನೆಸ್ಕೊ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.   ಈ ಸಂಬಂಧ ಎಕ್ಸ್(ಟ್ವಿಟರ್) ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತಕ್ಕೆ ಹೆಮ್ಮೆಯ ಸಂಗತಿಯಿದು. ವರ್ಣಿಸಲಾಗದ ಸೌಂದರ್ಯ ಹೊಂದಿರುವ ಹೊಯ್ಸಳ ದೇವಾಲಯಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ. ನಮ್ಮ ಪೂರ್ವಜರ ಅಸಾಧಾರಣವಾದ ಕರಕುಶಲತೆ ಇದಾಗಿದೆ ಎಂದು ತಿಳಿಸಿದ್ದಾರೆ.

Gruhalakshmi Scheme: ಗೃಹಲಕ್ಷ್ಮಿ ಹಣ ಜಮಾವಣೆಯಲ್ಲಿ ಸಮಸ್ಯೆ ಆಗಲು ಕಾರಣ ಏನ್‌ ಗೊತ್ತಾ?

 ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಒಂದು ಮೂರು ವಾರಗಳು ಕಳೆದಿವೆ. ಇನ್ನು ಕೂಡ ಅನೇಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಹಣ ಕೈಗೆ ಸೇರಿಲ್ಲ. ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ಖಾತೆಗೆ ಹಣವನ್ನು ಡಿಬಿಟಿ ಮಾಡಿದೆ. ಆದರೂ ಸಹ ಕೆಲವು ಮಂದಿಗೆ ಗೃಹಲಕ್ಷ್ಮಿ ಸಂದೇಶ ಬಂದಿದ್ದರೂ ಹಣ ಯಾಕೆ ಬಂದಿಲ್ಲ ಅಂತಾ ಸಾಕಷ್ಟು ಮಂದಿ ಪ್ರಶ್ನಿಸುವಂತಾಗಿದೆ. ಹೌದು, ರಾಜ್ಯದಲ್ಲಿ ಇನ್ನು ಕೂಡ ಹಲವು ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ. ಇನ್ನು ಕೂಡ 30% ರಷ್ಟು ಮಂದಿಗೆ ಹಣ ಜಮೆ ಆಗುವುದು ಬಾಕಿಯಿದೆ. ಅಷ್ಟೇ ಅಲ್ಲ ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳಿಗೂ ಇದೇ ತಿಂಗಳು ಹಣ ಜಮೆ ಆಗಲಿದೆಯಾ ಅನ್ನೋದು ಅನುಮಾನವಿದೆ. ಹಾಗಾದ್ರೆ ಈ ತಿಂಗಳು ಎಷ್ಟು ಮಂದಿಗೆ ಹಣ ಜಮೆ ಆಗಬಹುದು, ಹಣ ಕೈ ಸೇರಿಲ್ಲದವರು ಮಾಡಬೇಕಾಗಿರುವುದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಕೈ ಸೇರಿದೆಯಾ? ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಲ್ಲಿ 30% ರಷ್ಟು ಮಂದಿಗೆ ಹಣ ಸಂದಾಯವಾಗಿಲ್ಲ. ಪ್ರತಿ ದಿನಗಳ 6-7 ಲಕ್ಷ ಜನರಿಗೆ ಅಂತ ಲೆಕ್ಕನೋಡಿದರೆ ಇನ್ನೂ 10 ರಿಂದ 12 ದಿನಗಳಲ್ಲಿ ಇನ್ನುಳಿದ ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ. ಅಂದರೆ ಈ ತಿಂಗಳ ಅಂತ್ಯದ ವೇಳೆಗೆ ಗೃಹಲಕ್ಷ್ಮಿ ಯೋಜನೆಯಡಿ ಆಯ್ಕೆಯಾದ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಆಗಲಿದೆ. ಈಗಾ...

ODI WORLDCUP 2023 ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ODI World Cup 2023: ವಿಶ್ವಕಪ್ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29 ರಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 3 ರವರೆಗೆ ನಡೆಯಲ್ಲಿವೆ. ಇದರಲ್ಲಿ ಒಟ್ಟು 10 ಅಭ್ಯಾಸ ಪಂದ್ಯಗಳು ನಡೆಯಲಿವೆ. ಈ ಅಭ್ಯಾಸ ಪಂದ್ಯಗಳು ಹೈದರಾಬಾದ್, ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ನಡೆಯಲಿವೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಕೆಟ್​ ಲೋಕದ ಮಹಾ ಸಂಭ್ರಮ ಆರಂಭವಾಗಲಿದೆ. 4 ವರ್ಷಗಳಿಗೊಮ್ಮೆ ನಡೆಯುವ  ಏಕದಿನ  ವಿಶ್ವಕಪ್​ಗೆ (ODI World Cup 2023) ಇದೇ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿಯಾಗಿ ಆತಿಥ್ಯವಹಿಸುತ್ತಿದೆ. ಟೂರ್ನಿಯ ಆರಂಭಿಕ ಪಂದ್ಯವು 2019 ರ ವಿಶ್ವಕಪ್ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ (England vs New Zealand) ನಡುವೆ ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿದೆ. ಇನ್ನು ಟೀಂ ಇಂಡಿಯಾ (Team India) ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ ತಂಡಗಳ ನಡುವೆ ಪರಸ್ಪರ ಅಭ್ಯಾಸ ಪಂದ್ಯಗಳು ನಡೆಯಲ್ಲಿವೆ. ಆ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ. ವಿಶ್ವಕಪ್ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29 ರಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 3 ರವರೆಗೆ ನಡೆಯಲ್ಲಿವೆ. ಇದರಲ್ಲಿ ಒಟ್ಟು 10 ಅಭ್ಯಾಸ ಪಂದ್ಯಗಳು ನಡೆ...